ಆಚಾರ್ಯ
ಆಚಾರವನ್ನು ತಿಳಿದು, ಉಪದೇಶಿಸಿ, ಅನುಷ್ಠಾನಕ್ಕೆ ತರಬಲ್ಲವ. ಯಜ್ಞದಲ್ಲಿ ಕರ್ಮೋಪದೇಶವನ್ನು ಮಾಡುವವ. ಅಧ್ಯಾತ್ಮವಿದ್ಯಾಗುರು. ತೈತ್ತಿರಿಯೋಪನಿಷತ್ತಿನಲ್ಲಿ ಆಚಾರ್ಯ ದೇವೋ ಭವ ಮುಂತಾದ ಮಾತುಗಳಿಂದ ನಿರ್ದೇಶಗೊಂಡಿದ್ದು ಪೂಜಾರ್ಹನೆನಿಸಿದ್ದಾನೆ. ಮನುಸ್ಮøತಿಯ ಪ್ರಕಾರ ಶಿಷ್ಯನಿಗೆ ಉಪನಯನ ಮಾಡಿಸಿ, ವೇದವೇದಾಂಗಗಳನ್ನು ಬೋಧಿಸತಕ್ಕವನು. ಯಾವುದಾದರೂ ಒಂದು ಪ್ರಧಾನವಾದ ಮತದ ಅಥವಾ ಧರ್ಮದ ಸ್ಥಾಪಕ. ಶುದ್ಧಪಾಂಡಿತ್ಯ, ದಕ್ಷತೆ, ದಾಕ್ಷಿಣ್ಯ ಶಿಷ್ಯವಾತ್ಸಲ್ಯ, ಜ್ಞಾನದಾನಸಾಮಥ್ರ್ಯ ಮುಂತಾದ ಗುಣಗಳು ಅವನಲ್ಲಿರಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಜೈನರಲ್ಲಿ ಪಂಚಪರಮೇಷ್ಠಿಗಳಲ್ಲಿ ಒಬ್ಬ; ಪೂಜಾರ್ಹ. ವೀರಶೈವರಲ್ಲೂ ಪಂಚಾರ್ಯರ ಆರಾಧನೆ ಇದೆ. ಮಹಾಭಾರತದ ದ್ರೋಣನ ನಾಮಾಂತರ. ಕೆಲವು ವೇಳೆ ಗೌರವ ಸೂಚಕವಾಗಿ ಅದನ್ನು ಹೆಸರಿನೊಡನೆ ಸೇರಿಸುವುದುಂಟು.						   
  (ಬಿ.ಕೆ.ಎಸ್.; ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ